೧೯೫೬ನೇ ಇಸವಿಯಲ್ಲಿ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು, ಆಗ ಹೊಸದಾಗಿ ಸ್ಥಾಪಿಸಲಾಗಿದ್ದ ಮೈಸೂರು ರಾಜ್ಯದೊಂದಿಗೆ ವಿಲೀನ ಗೊಳಿಸಲಾಯಿತು. ಮಹಾರಾಷ್ಟ್ರ ಸರ್ಕಾರವು ಇದನ್ನು ವಿರೋಧಿಸಿತು. == ನಾಲ್ಕು ಸದಸ್ಯರ ಆಯೋಗ == ಮಹಾರಾಷ್ಟ್ರ ಸರಕಾರದ ಒತ್ತಾಯಕ್ಕೆ ಮಣಿದು, ಭಾರತ ಸರ್ಕಾರವು ಜೂನ್ ೫, ೧೯೬೦ರಲ್ಲಿ ೪ ಸದಸ್ಯರ ಆಯೋಗವನ್ನು ರಚಿಸಿತು.ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಹಾಜನ್ ಹಾಗೂ ಇತರೆ ಪರಿಣಿತರ ತಂಡ ಗಡಿ ಭಾಗದ ಅಧ್ಯಯನ ನಡೆಸಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ತೀರ್ಪನ್ನು ನೀಡಿತು [೧] 2007-09-29 ವೇಬ್ಯಾಕ್ ಮೆಷಿನ್ ನಲ್ಲಿ. == ಮಹಾಜನ್ ಆಯೋಗ == ಇದಾದ ನಂತರ, ಮಹಾರಾಷ್ಟ್ರ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರವು ಜಸ್ಟಿಸ್ ಮೆಹರ್‌ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಮಹಾಜನ್ ಆಯೋಗವನ್ನು ಸ್ಥಾಪಿಸಿತು. ಆಯೋಗವು, ಕರ್ನಾಟಕ ಹಾಗು ಮಹಾರಾಷ್ಟ್ರದ ವಾದಗಳನ್ನು ಆಲಿಸಿ. ಗಡಿ ಪ್ರದೇಶದ ೨೫೭೨ ಜನರನ್ನು ಸಂದರ್ಶಿಸಿ ಅವರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದ ಆಯೋಗವು ತನ್ನ ತೀರ್ಪನ್ನು ಪ್ರಕಟಿಸಿತು. ಇದರನ್ವಯ ಮಹಾರಾಷ್ಟ್ರವು ಬೇಡಿಕೆ ಸಲ್ಲಿಸಿದ್ದ ೮೧೪ ಹಳ್ಳಿಗಳ ಪೈಕಿ ಅದಕ್ಕೆ ನಿಪ್ಪಾಣಿ, ಖಾನಾಪುರ ಹಾಗೂ ನಂದಗಢ ಒಳಗೊಂಡಂತೆ ೨೬೨ ಹಳ್ಳಿಗಳನ್ನು ಅದಕ್ಕೆ ನೀಡಲಾಯಿತು. ಕರ್ನಾಟಕದ ಪಾಲಿಗೆ ಸೊಲ್ಲಾಪುರವೂ ಸೇರಿದಂತೆ ೨೪೭ ಹಳ್ಳಿಗಳನ್ನು ನೀಡಲಾಯಿತು. ಇದಲ್ಲದೇ, ಮಹಾರಾಷ್ಟ್ರವು ೨೬೦ ಹಳ್ಳಿಗಳು ಕನ್ನಡ ಬಹುಸಂಖ್ಯಾತವೆಂದು ಒಪ್ಪಿ ಅದನ್ನೂ ಕರ್ನಾಟಕಕ್ಕೆ ನೀಡಲೊಪ್ಪಿತು. ಆದರೆ ಗಣ್ಯರ ಸಮಿತಿಯ ತೀರ್ಪನ್ನೊಪ್ಪದ ಮಹಾರಾಷ್ತ್ರ ಸರಕಾರ ತನ್ನ ಪಾಲಿಗೆ ಬಂದ ಪ್ರಾಂತ್ಯಗಳನ್ನು ತಿರಸ್ಕರಿಸಿ ಏಕೀಕೃತ ಭಾರತದ ಸಂಸೃತಿಯ ವಿರುದ್ಧ ಬೆಳಗಾವಿಯ ಬೇಡಿಕೆಯನ್ನು ಇಂದಿಗೂ ಮುಂದುವರೆಸುತ್ತಿದೆ .[೨] [೩] 2007-03-11 ವೇಬ್ಯಾಕ್ ಮೆಷಿನ್ ನಲ್ಲಿ. ಮಹಾಜನ್ ವರದಿಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. == ಇತ್ತೀಚೆಗಿನ ಘಟನಾವಳಿಗಳು == == ಇವನ್ನೂ ನೋಡಿ == ಬೆಳಗಾವಿ ಮಹಾಜನ್ ಆಯೋಗ == ಮೂಲಗಳು == ಬೆಳಗಾವಿ ಗಡಿ ವಿವಾದ 2007-09-29 ವೇಬ್ಯಾಕ್ ಮೆಷಿನ್ ನಲ್ಲಿ. ಮಹಾಜನ್ ವರದಿ 2007-03-11 ವೇಬ್ಯಾಕ್ ಮೆಷಿನ್ ನಲ್ಲಿ. == ಹೊರಗಿನ ಸಂಪರ್ಕಗಳು == ವಿವಾದದ ಬಗಿಗಿನ ಸುದ್ದಿ ಬೆಳಗಾವಿಯಲ್ಲಿ ವಿಧಾನಸೌಧ ಮಹಾರಾಷ್ಟದ ಉಪಮುಖ್ಯಮಂತ್ರಿಗಳ ನಿಲುವು ಬೆಳಗಾವಿಯ ಸಮಾವೇಶ